Showing posts with label ಕವನ. Show all posts
Showing posts with label ಕವನ. Show all posts

Thursday, November 10, 2016

ತ.ರಾ.ಸು ರವರಿಗೆ ನಮನ

ತ.ರಾ.ಸು ರವರಿಗೆ ನಮನ



ರಾ ಸು ಬರೆದ ದುರ್ಗದ ಚರಿತೆ
ಒಂದು ಗದ್ಯರೂಪದ ಕವಿತೆ
ಅದರ ಪದಲಾಲಿತ್ಯದ ಸೋಬಗಾಯಿತೆ
ಒಂದು ಸುಂದರ ಹಂಸ ಗೀತೆ

ಈ ಚೆರಿತೆಯ ಸೊಗಸೊಂದು ಗರಿ ಬಿಚ್ಚಿದ ನವಿಲು
ಇದರ ಮೂಲಕವೇ ಅವರ ಹಿರಿಮೆ ಮುಟ್ಟಿತು ಮುಗಿಲು
ಸರಿಸಿ ದುರ್ಗದ ಇತಿಹಾಸದ ಮೇಲೆ ಕವಿದ ಇರುಳು
ಜನಮನದಿ ನೆಲೆ ಮಾಡಿತವರ ಕಂಬನಿಯ ಕುಯಿಲು

ಪದವಿಗಾಗಿ ಸುರಿಸುವರು ಏಸು ಮಂದಿ ರಕ್ತ
ರಾತ್ರಿ ಹಗಲು ಹೊಂಚು ಹಾಕುವ ಅಧಿಕಾರದ ಭಕ್ತ
ಇತಿಹಾಸದ ಪುಟಗಳನು ಮಾಡಿ ರಕ್ತ ಸಿಕ್ತ
ಇವರು ಸರ್ವಾಧಿಕಾರ ಪಡೆದ ರೀತಿ ಎಷ್ಟು ಯುಕ್ತ?

ಎಂದು ತೀರುವುದೋ ಇವರ ರಾಜ್ಯ ದಾಹ?
ಎಂದು ಕೊನೆಗಾಣುವುದೋ ಇವರ ಅಧಿಕಾರದ ಮೋಹ?
ಯಾರು ಬಿಡುವರೋ ಈ ಬಾಣಕೆ ತಿರುಗು ಬಾಣ?
ಯಾರು ಮುಡಿಪಾಗಿಡುವರೋ ದೇಶಕ್ಕಾಗಿ ತಮ್ಮ ಪ್ರಾಣ?

ಉಷೆ ಮೂಡಿ ನಿಶೆ ಓಡಿ ಕೆಂಪಾಯಿತು ಮುಗಿಲು
ಕಗ್ಗತ್ತಲ ರಾತ್ರಿ ಕಳೆದು ಮೂಡಿತು ಹೊಸ ಹಗಲು
ತಾಮಸದ ವಿರುದ್ಧ ಜ್ಯೋತಿಯ ವಿಜಯೋತ್ಸವ
ನಡಿಯುತ ಬಂದಿದೆ ಅನಾದಿಯಿಂದ ಈ ದಿನನಿತ್ಯದುತ್ಸವ।

ಈ ಪುಸ್ತಕಗಳ ಮೂಲಕ ಪಸರಿಸಿದರು ಕನ್ನಡ ಕಸ್ತೂರಿ
ಕಂಕಣ ಬದ್ಧರಾಗಿ ಬಾರಿಸಿದರು ದುರ್ಗದ ಕೋಟೆಯ ಜಯಭೇರಿ
ಮತ್ತಿ ತಿಮ್ಮಣ್ಣ ನಾಯಕರು ಕಟ್ಟಿದ ಸುಭದ್ರ ದುರ್ಗ
ಅಸ್ತಮಾನ ವಾಯಿತು ಮದಕರಿ ನಾಯಕನು ಪಡೆದಾಗ ವೀರ ಸ್ವರ್ಗ

                                   ಕಠಾರಿವೀರ

Monday, June 25, 2012

ಹತ್ತನೆಯ ಮದುವೆ ವಾರ್ಷಿಕೋತ್ಸವ


ಕಳೆದ ತಿಂಗಳು, ನನ್ನ ಭಾವ ಮೈದುನನ 10 ನೇ ಮದುವೆ ವಾರ್ಷಿಕೋತ್ಸವದ ಪ್ರಯುಕ್ತ ಒಂದು ಪುಟ್ಟ ಕವನವನ್ನು ಬರೆದಿದ್ದೆ. ಅದನ್ನೇ ಇಲ್ಲಿ ಪ್ರಸ್ತುತ ಪಡೆಸುತ್ತಿದ್ದೇನೆ.


ನಿಮ್ಮ ದಾಂಪತ್ಯ ಜೀವನಕ್ಕೀಗ ಒಂದು ದಶಕ

ಕುಡಿದಿರುವಿರಿ ಗೃಹಸ್ಥಾಶ್ರಮದ ಬೇವಿನ ರಸ ಮತ್ತು ಪಾನಕ ||


ಸುಗಮವಾಗಿ ಸಾಗಲಿ ನಿಮ್ಮೀರ್ವರ ನವೀನ ದಶಕ

ಸುಧಾಮಯಿಯಾಗಿರಲಿ ನಿಮ್ಮಯ ಭವಿಷ್ಯ, ಆಗಲಿ ನಿಮ್ಮ ಬಾಳು ಸಾರ್ಥಕ ||


ದಶಕಗಳುರುಳಿ ದಶಕಗಳು ಕಳೆದು ಹೊಡೆಯಿರಿ ನೀವಿಬ್ಬರೊಂದು ಶತಕ

ನಿಮ್ಮೀ ಶತಕದ ಪಯಣವಾಗಲಿ ನಮ್ಮೆಲ್ಲರಿಗೂ ನಿದರ್ಶಕ ||


Tuesday, October 25, 2011

"ಜನ್ಮ ದಿನದ ಶುಭಾಷಯ" - ಹೇಮಂತನಿಗೆ ಅರ್ಪಿತ

ನಾನು ನಮ್ಮ ಆಫೀಸಿಗೆ "ಕ್ಯಾಬ್" ನಲ್ಲಿ ಹೋಗ್ತೀನಿ. ನನ್ನ "ಕ್ಯಾಬ್" ಮಿತ್ರರಾದ ಹೇಮಂತು ಅವರ ಜನ್ಮದಿನಕ್ಕೆ ನಾನು ಈ ಕವನವನ್ನು ರಚಿಸಿದ್ದು.



ಜನ್ಮ ದಿನದ ಶುಭಾಷಯ

ಪ್ರೀತಿಯ ಹೇಮಂತು
ಕೇಳಿರಿ ನಮ್ಮಯ ಮನದ ತಂತು!

ಹಾರೈಸುವರು ಅರುಣಾ, ಕಿರಣ,
ತುಂಬಿರಲಿ ಬಾಳಲಿ ಹಸಿರು ತೋರಣ, ನಿತ್ಯ ಹೂರಣ!

ಹರಸುವನು ಪ್ರವೀಣ,
ಮೂಡಲಿ ಮನದಲಿ ನೂತನ ಚೇತನ!

ಹೇಳುವನು ಭರತ್,
ಸಂತಸದಿಂ ತುಂಬಿರಲಿ ನಿಮ್ಮ ಜಗತ್!

ಎನ್ನುವರು ಭಾವನಾ,
ಸದಾ ನಗುವು ಬೀರುತಿರಲಿ ನಿಮ್ಮಯ ವದನ!

ನುಡಿದರು ಮಧುರ,
ಬಾಳ ಪಯಣವಾಗಲಿ ಸುಲಲಿತ, ಸುಮಧುರ!

ಹರಸುವನು ರವಿ,
ಬದುಕಲಿ ತುಂಬಿರಲಿ ಸದಾ ಸವಿ!

ಹಾರೈಸುವನು ಶ್ರೀನಿವಾಸ,
ನಿಮ್ಮ ಬಾಳಲಿ ತುಂಬಿರಲಿ ಸಂತಸ, ಸಮರಸ!

ಹೇಳುವರು ಸುಮತಾ,
ಬರಲಿ ನಿಮಗೊಬ್ಬಳು ಮಡದಿ ಸುಸಂಸ್ಕೃತ!

ನುಡಿಯುವರು ಸುಷ್,
ಇರಲಿ ಸದಾ ನಿಮ್ಮ ದಿಲ್ ಖುಷ್!

-- ಇಂತಿ ನಿಮ್ಮ ಪ್ರೀತಿಯ
ರೂಟ್ ನಂ. ೧ ಕ್ಯಾಬಿನ ದುನಿಯಾ





- ಕಠಾರಿ ವೀರ


ವಸುಂಧರೆ - ಒಂದು ಕವನ

ವಸುಂಧರೆ

ವಸುಂಧರೆ, ಹೊರುವಳು ಜಗದ ಹೊರೆ
ತಾಯಾಗಿ ನೀಡುವಳು ಆಸರೆ
ಅಕ್ಕ ತಂಗಿಯಾಗಿ ಓಗೊಡುವಳು ನಮ್ಮಯ ಕರೆ


ಆಗುವಳು ಭಾವನೆಗಳ ಹಂಚಿಕೊಳ್ಳುವ ಸ್ನೇಹಿತೆ
ಬಾಳ ಸಂಗಾತಿಯಾಗಿ ನಡೆವಳು ಈ ವನಿತೆ


ಮಗಳಾಗಿ ಹೆಚ್ಚಿಸುವಳು ಹುಟ್ಟಿದ ಮನೆಯ ಕೀರ್ತಿ
ಸೊಸೆಯಾಗಿ ಬೆಳಗುವಳು ಮೆಟ್ಟಿದ ಮನೆಯ ಜ್ಯೋತಿ


ಎಲ್ಲಾ ಪಾತ್ರಗಳ ನಿಭಾಯಿಸಬಲ್ಲ ಶಕ್ತಿ
ಇರುವುದವಳಿಗೆ ಸಹಿಷ್ಣುತೆ, ಪಕ್ವತೆ ಮತ್ತು ಯುಕ್ತಿ
ಸಹನಶೀಲೆ ಶಾಂತ ಮೂರ್ತಿ ಎಂಬುದೇ ಲೋಕೋಕ್ತಿ


ಇವಳಲ್ಲಿ ಬೆರೆತಿರುವ ದೈವಾಂಶ
ಸಾರಿ ಹೇಳುತಿಹುದು ಈ ಪದ್ಯದ ಸಾರಾಂಶ!






- ಕಠಾರಿ ವೀರ