Thursday, November 10, 2016

ತ.ರಾ.ಸು ರವರಿಗೆ ನಮನ

ತ.ರಾ.ಸು ರವರಿಗೆ ನಮನರಾ ಸು ಬರೆದ ದುರ್ಗದ ಚರಿತೆ
ಒಂದು ಗದ್ಯರೂಪದ ಕವಿತೆ
ಅದರ ಪದಲಾಲಿತ್ಯದ ಸೋಬಗಾಯಿತೆ
ಒಂದು ಸುಂದರ ಹಂಸ ಗೀತೆ

ಈ ಚೆರಿತೆಯ ಸೊಗಸೊಂದು ಗರಿ ಬಿಚ್ಚಿದ ನವಿಲು
ಇದರ ಮೂಲಕವೇ ಅವರ ಹಿರಿಮೆ ಮುಟ್ಟಿತು ಮುಗಿಲು
ಸರಿಸಿ ದುರ್ಗದ ಇತಿಹಾಸದ ಮೇಲೆ ಕವಿದ ಇರುಳು
ಜನಮನದಿ ನೆಲೆ ಮಾಡಿತವರ ಕಂಬನಿಯ ಕುಯಿಲು

ಪದವಿಗಾಗಿ ಸುರಿಸುವರು ಏಸು ಮಂದಿ ರಕ್ತ
ರಾತ್ರಿ ಹಗಲು ಹೊಂಚು ಹಾಕುವ ಅಧಿಕಾರದ ಭಕ್ತ
ಇತಿಹಾಸದ ಪುಟಗಳನು ಮಾಡಿ ರಕ್ತ ಸಿಕ್ತ
ಇವರು ಸರ್ವಾಧಿಕಾರ ಪಡೆದ ರೀತಿ ಎಷ್ಟು ಯುಕ್ತ?

ಎಂದು ತೀರುವುದೋ ಇವರ ರಾಜ್ಯ ದಾಹ?
ಎಂದು ಕೊನೆಗಾಣುವುದೋ ಇವರ ಅಧಿಕಾರದ ಮೋಹ?
ಯಾರು ಬಿದುವರೋ ಈ ಬಾಣಕೆ ತಿರುಗು ಬಾಣ?
ಯಾರು ಮುಡಿಪಾಗಿಡುವರೋ ದೇಶಕ್ಕಾಗಿ ತಮ್ಮ ಪ್ರಾಣ?

ಉಷೆ ಮೂಡಿ ನಿಶೆ ಓಡಿ ಕೆಂಪಾಯಿತು ಮುಗಿಲು
ಕಗ್ಗತ್ತಲ ರಾತ್ರಿ ಕಳೆದು ಮೂಡಿತು ಹೊಸ ಹಗಲು
ತಾಮಸದ ವಿರುದ್ಧ ಜ್ಯೋತಿಯ ವಿಜಯೋತ್ಸವ
ನಡಿಯುತ ಬಂದಿದೆ ಅನಾದಿಯಿಂದ ಈ ದಿನನಿತ್ಯದುತ್ಸವ।

ಈ ಪುಸ್ತಕಗಳ ಮೂಲಕ ಪಸರಿಸಿದರು ಕನ್ನಡ ಕಸ್ತೂರಿ
ಕಂಕಣ ಬದ್ಧರಾಗಿ ಬಾರಿಸಿದರು ದುರ್ಗದ ಕೋಟೆಯ ಜಯಭೇರಿ
ಮತ್ತಿ ತಿಮ್ಮಣ್ಣ ನಾಯಕರು ಕಟ್ಟಿದ ಸುಭದ್ರ ದುರ್ಗ
ಅಸ್ತಮಾನ ವಾಯಿತು ಮದಕರಿ ನಾಯಕನು ಪಡೆದಾಗ ವೀರ ಸ್ವರ್ಗ

                                   ಕಠಾರಿವೀರ

No comments: