Tuesday, October 25, 2011

"ನಮ್ಮ ಮನೆ ಅಂಗಳದಿ" ಭಾವಗೀತೆಯ ಸಾಹಿತ್ಯ

ನಾನು ಈ ಕವನ/ಭಾವಗೀತೆನ ಬಹಳ ದಿನಗಳಿಂದ ಹುಡುಕ್ತಿದ್ದೆ. ಇಗೋ, ಇದರ ಸಾಹಿತ್ಯ ಹೀಗಿದೆ. ಇದರ ಸಾಹಿತಿಗಳು - ವೀಸೀ (ಅಂದರೆ ವೀ ಸೀತಾರಾಮಯ್ಯ ನವರು):

19-08-2012: ಈ ಕವನವು ಇನ್ನು ಒಂದು ತಾಣದಲ್ಲಿ ದೊರೆಯಿತು - ಅದಕ್ಕೆ ಇಲ್ಲಿ ಕ್ಲಿಕ್ಕಿಸಿ. kannadalyrics.com ಅವರಿಗೂ ನನ್ನ ಅನಂತ ಧನ್ಯವಾದಗಳು.

ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು

 
ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು
ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು

ಮರೆಮೋಸ ಕೊಂಕುಗಳನರಿಯಳಿವಳು ಇನಿಸ ವಿಶ್ವಾಸವನು ಕಂಡರಿಯಳು
ಕಷ್ಟಗಳ ಸಹಿಸದೆಯೆ ಕಾಣದೆಯೇ ಬೆಳೆದವಳು ಸಲಹಿಕೊಳಿರಿಮಗಳ ಓಪ್ಪಿಸುವೆವು

ನಿಮಗಿವಳು ನೀಡುತಿಹ ಹಾಲು ಹಣ್ಣುಗಳ ಸವಿ ಎಂದೆದೂ ಅವಳ ನಡೆ ನಿಮ್ಮ ಪರವಾಗಿ
ನಮ್ಮ ಕುಲ ಮನೆಗಳಿಗೆ ಹೊರಗಾಗಿ ಬಂದಿಹಳು ನಿಮ್ಮ ಕುಲವನು ಬೆಳಸೆ ಬಂದಿರುವಳು

ನಿನ್ನ ಮಡದಿಯ ಕೊಂಡು ಸುಖವಾಗಿರವ್ ಮಗುವೆ ನಿಮ್ಮ ಸೊಸೆ ಸೋದರಿಯು ಕೊಳ್ಳಿರಿವಳ
ನಿಮ್ಮ ಕೀರುತಿ ಬೆಳೆಯಲಿ ಇವಳ ಸೌಜನ್ಯದಲಿ ನಿಮ್ಮ ಕುಲಶೀಲಗಳು ಪರಿಮಳಿಸಲಿ

ಹೆತ್ತಮನೆಗಿಂದು ಹೊರಗಾದೆ ನೀ ಮಗಳೆ ಈ ಮನೆಯೇ ಈ ಇವರೆ ನಿನ್ನವರು ಮುಂದೆ
ಇವರೆ ತಾಯ್ಗಳು ಸಖರು ಭಾಗ್ಯವನು ಬೆಳಸುವರು ಇವರ ದೇವರೆ ನಿನ್ನ ದೇವರುಗಳು

ನಿಲ್ಲು ಕಣ್ಣರೊಸಿಕೊಳು ನಿಲ್ಲು ತಾಯ್ ಹೋಗುವೆವು ತಾಯಿರ ತಂದೆಯಿರ ಕೊಳ್ಳಿರಿವಳ
ಎರಡು ಮನೆಗಳ ಹೆಸರು ಖ್ಯಾತಿ ಉಳಿವಂತೆ ತುಂಬಿದಾಯುಶ್ಯದಲಿ ಬಾಳಿ ಬದುಕು





- ಕಠಾರಿ ವೀರ

No comments: